ಈ ನಾಡು ಕಂಡ ಅಪ್ಪಟ ಜಂಟಲ್ ಮ್ಯಾನ್ ರಾಜಕಾರಣಿ ಎಸ್.ಎಂ.ಕೃಷ್ಣ: ಎಚ್.ವಿಶ್ವನಾಥ್ರಾಜಕೀಯದಲ್ಲಿ ಟೀಕೆಗಳು ಬಂದಾಗ ಅವುಗಳನ್ನು ಹೇಗೆ ಸಮಚಿತ್ತದಿಂದ ಸ್ವೀಕರಿಸಬೇಕು, ಆಡಳಿತದ ಅವಧಿಯಲ್ಲಿ ಎದುರಾಗುವ ಸಂಕಷ್ಟಗಳನ್ನು ಯಾವ ರೀತಿ ನಿಭಾಯಿಸಬೇಕು ಎಂಬುದಕ್ಕೆ ಎಸ್.ಎಂ.ಕೃಷ್ಣ ಅವರ ರಾಜಕೀಯ ಜೀವನ ಮಾದರಿ ಆಗುವಂತಹ ಉದಾಹರಣೆ. ಎಸ್.ಎಂ.ಕೃಷ್ಣ ಅವರ ಜೀವನ ರೀತಿ, ಅವರ ಉಡುಗೆ ತೊಡುಗೆ, ಅವರ ಭಾಷಾ ಶುದ್ಧತೆ, ಅವರಿಗೆ ಇದ್ದ ಊಟದ ಪ್ರೀತಿ ಎಲ್ಲವೂ ಚೆಂದ.