ಬದುಕಿನ ಸಮಸ್ಯೆಗಳನ್ನೇ ಸವಾಲಾಗಿ ಸ್ವೀಕರಿಸಬೇಕು: ಡಾ. ಕಲ್ಯಾಣಸಿರಿ ಬಂತೇಜಿಬದುಕಿನಲ್ಲಿ ಹುಟ್ಟು, ದುಃಖ, ರೋಗ, ಮುಪ್ಪು ಇರುತ್ತವೆ. ಇವುಗಳ ನಡುವಿನ ಬದುಕೇ ಜೀವನ. ಸವಾಲುಗಳನ್ನು ಎದುರಿಸಿ ಬದುಕಿದಾಗ ಮನುಷ್ಯ ಸಾಧನೆ ಮಾಡಲು ಸಾಧ್ಯ. ಲೋಭ- ಮೋಹ, ದ್ವೇಷಕ್ಕೆ ಅಂಟಿಕೊಂಡಿರುವ ಮನುಷ್ಯನಿಗೆ ಹತಾಶೆ, ಅತೃಪ್ತಿ ಕಾಡುತ್ತದೆ. ಸತ್ಯ, ಪ್ರಾಮಾಣಿಕತೆ, ಸನ್ಮಾರ್ಗದಿಂದ ಜೀವನ ನಡೆಸಿದಾಗ ಮಾತ್ರ ಸಂತೃಪ್ತಿ ಜೀವನ ಕಂಡುಕೊಳ್ಳಬಹುದು. ಪ್ರತಿಯೊಬ್ಬರೂ ಬುದ್ಧ, ಡಾ. ಅಂಬೇಡ್ಕರ್ ಅವರು ಹಾಕಿಕೊಟ್ಟಿರುವ ಮಾರ್ಗದಲ್ಲಿ ನಡೆಯಬೇಕು