ರಾಜಕಾರಣದ ಮೌಲ್ಯ ಕುಸಿತಕ್ಕೆ ಮತದಾರರು ಹೊಣೆಗಾರರುಭಾರತಕ್ಕೆ ಪ್ರಜಾಪ್ರಭುತ್ವ ಆಡಳಿತ ಹೊಸದೇನೂ ಅಲ್ಲ. ಪುರಾತನ ಭಾರತದ ವೈಶಾಲಿ. ಲಿಚ್ಛವಿ, ಕುಶಾನ ಮುಂತಾದ ಗಣರಾಜ್ಯಗಳು ಪ್ರಜಾಪ್ರಭುತ್ವದ ರೂಪುರೇಷೆಗಳನ್ನು ಜಗತ್ತಿಗೆ ಪರಿಚಯಿಸಿದ್ದವು. ಆದರೆ, ಆಧುನಿಕ ಪ್ರಜಾಪ್ರಭುತ್ವವು ಜಾತೀಯತೆ, ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಚುನಾವಣಾ ಅಕ್ರಮ ಮುಂತಾದ ಕಲುಷಿತ ಮಾರ್ಗದಿಂದ ಅರ್ಥ ಕಳೆದುಕೊಳ್ಳುತ್ತಿದೆ.