ಯುವ ಸಮುದಾಯದಲ್ಲಿ ಪ್ರಶ್ನಿಸುವ ಮನೋಭಾವದಿಂದ ವಿಚಾರಶೀಲತೆಯೂ ಇಮ್ಮಡಿಯುವ ಸಮುದಾಯ ಆದಷ್ಟು ಹೃದಯ ವೈಶಾಲ್ಯತೆ ಹೊಂದಿರಬೇಕು. ವೈಯಕ್ತಿಕ ಮತ್ತು ಕೌಟುಂಬಿಕ ನೆಲೆಯ ಮೀರಿ ಸಾಮಾಜಿಕ ನೆಲೆಯಲ್ಲಿ ಬದುಕಬೇಕು. ಸಮಾಜದಲ್ಲಿನ ನೆರೆಹೊರೆಯವರ ಹಿತವನ್ನು ಕಾಯಬೇಕು. ಸ್ವಾರ್ಥ ಕೇಂದ್ರಿತವಾಗಿ ಆಲೋಚಿಸದೆ ಇತರರ ಅಭ್ಯುದಯಕ್ಕೂ ಶ್ರಮಿಸಬೇಕು. ಜಾತೀಯತೆ, ಧರ್ಮಾಂಧತೆ, ಸ್ವಜನ ಪಕ್ಷಪಾತ, ಭ್ರಷ್ಟಾಚಾರಗಳಿಂದ ದೂರವಿರಬೇಕು.