ಮೂಲ ಸೌಕರ್ಯಕ್ಕೆ ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆಸಂಸ್ಥೆಯ ಮುಂಭಾಗದಲ್ಲಿ ಜಾಮಿಯಿಸಿದ್ದ ವಿದ್ಯಾರ್ಥಿಗಳು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರು, ಅಧೀಕ್ಷಕರು ಹಾಗೂ ಮೈಸೂರು ವಿವಿ ವಿರುದ್ಧ ಧಿಕ್ಕಾರಗಳನ್ನು ಕೂಗಿದರು. ಕುಡಿಯುವ ನೀರಿಗಾಗಿ ವಿಭಾಗದ ಅಧೀಕ್ಷಕರನ್ನು ಕೇಳಿದರೆ ವಿದ್ಯಾರ್ಥಿ ವಿರುದ್ಧ ಏಕವಚನದಲ್ಲಿ ಮಾತನಾಡಿದಲ್ಲದೆ, ನೀರು ಬೇಕಾದರೇ ಕೊಳಚೆ ನೀರನ್ನು ಕುಡಿಯಿರಿ ಎಂದು ಹೇಳಿದ್ದು, ಹಾಗೇ ನಿಮ್ಮ ಹಣದಲ್ಲಿ ತಂದು ಕುಡಿಯಿರಿ, ಇದು ನನ್ನ ಕೆಲಸವಲ್ಲ ಎಂದು ಪಲಾಯನದ ಮಾತುಗಳನ್ನಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.