ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ: ಡಿಸಿಯಿಂದ ಪೂರ್ವಭಾವಿ ಸಭೆಸಮಾವೇಶದಲ್ಲಿ 50 ಸಾವಿರಕ್ಕೂ ಜನರು ಭಾಗವಹಿಸುತ್ತಿದ್ದು, ಅವರಿಗೆ ಕುಡಿಯುವ ನೀರು, ಮಜ್ಜಿಗೆ ವ್ಯವಸ್ಥೆ ಮಾಡಬೇಕು.ವೇದಿಕೆ, ಶಿಷ್ಟಾಚಾರ, ಆಹಾರ, ಸ್ವಚ್ಛತೆ, ಭದ್ರತೆ, ಆರೋಗ್ಯ, ಪ್ರಚಾರ, ಬಸ್ ಗಳ ಸಮಿತಿಗಳನ್ನು ರಚಿಸಿ ಅಧಿಕಾರಿಗಳಿಗೆ ಜವಾಬ್ದಾರಿಗಳನ್ನು ವಹಿಸಲಾಗಿದ್ದು, ಸಮರ್ಪಕವಾಗಿ ಕೆಲಸ ನಿರ್ವಹಿಸಬೇಕು. ಗ್ರಾಮ ಪಂಚಾಯ್ತಿಗಳಿಂದ ನಗರ ಸಭೆ, ಪುರಸಭೆಗಳಿಂದ ಫಲಾನುಭವಿಗಳನ್ನು ಕರೆ ತರಲು ಬಸ್ ಗಳ ವ್ಯವಸ್ಥೆ ಮಾಡಲಾಗಿದ್ದು, ಫಲಾನುಭವಿಗಳ ಕರೆ ತರಲು ಅಗತ್ಯ ಕ್ರಮ ವಹಿಸಬೇಕು.