ನಂಜನಗೂಡು ನಗರಸಭೆ: 2.50 ಕೋಟಿ ರು. ಉಳಿತಾಯ ಬಜೆಟ್ ಮಂಡನೆಈ ಬಾರಿ ನಗರಸಭೆಗೆ ಆದಾಯ ಬರುವ ಆಸ್ತಿಗಳನ್ನು ಸೃಷ್ಟಿ ಮಾಡಲು ಕ್ರಮವಹಿಸಲಾಗಿದೆ. ಎಲ್ಲ ವಾರ್ಡ್ಗಳಲ್ಲಿ ರಸ್ತೆ, ಪಾದಚಾರಿ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ 9.5 ಕೋಟಿ, ಘನತ್ಯಾಜ್ಯ ನಿರ್ವಹಣಾ ಘಟಕಕ್ಕೆ 1.5 ಕೋಟಿ, ನೀರು ಸರಬರಾಜು ನಿರ್ವಹಣೆಗೆ 2.05 ಕೋಟಿ, ಉದ್ಯಾನಗಳ ಅಭಿವೃದ್ಧಿಗಾಗಿ 75 ಲಕ್ಷ, ನಗರಸಭೆ ಅಧಿಕಾರಿಗಳ ವೇತನಕ್ಕಾಗಿ 4.77 ಕೋಟಿ, ಬೀದಿದೀಪ ವಿದ್ಯುತ್ ಶುಲ್ಕ ಪಾವತಿಗಾಗಿ 5.75 ಕೋಟಿ, ನೀರು ಸರಬರಾಜು ವಿದ್ಯುತ್ ಶುಲ್ಕ ಪಾವತಿಗಾಗಿ 2.75 ಕೋಟಿ, ನೈರ್ಮಲ್ಯ ವೆಚ್ಚಾಗಿ 2 ಕೋಟಿ, ದುರಸ್ತಿ ಕಾರ್ಯಗಳಿಗಾಗಿ 1.55 ಕೋಟಿ ಮೀಸಲಿಡಲಾಗಿದೆ.