ಶ್ರೀ ಕೃಷ್ಣ ಎಲ್ಲಾ ಬಗೆಯ ಗುಣ, ಬಾಂಧವ್ಯ ಹೊಂದಿದ್ದ ಮಹಾನ್ ಮಹೀಮ: ಮಲ್ಲಿಕಾರ್ಜುನಸ್ವಾಮಿಕೃಷ್ಣ ಅಸಾಧ್ಯ ಬುದ್ಧಿವಂತ ಜೊತೆಗೆ ತನ್ನ ಸ್ನೇಹಿತರಿಗೆ ಉತ್ತಮ ಗೆಳೆಯನಾಗಿದ್ದ. ಯುದ್ಧತಂತ್ರ ಕಲೆ, ಯುದ್ಧ ಮುನ್ನಡಿಸುವ ಕಲೆ, ಯುದ್ಧ ನಡೆಯದಂತೆ ತಡೆಯುವ ಬುದ್ಧಿಜೀವಿಯಾಗಿದ್ದನು. ಇಡೀ ಲೋಕದ ಒಳಿತಿಗೆ ಪ್ರತಿಯೊಬ್ಬ ಮನುಷ್ಯನೂ ಹೇಗೆ ಇರಬೇಕೆಂಬ ವಿವೇಕವನ್ನು ತಿಳಿಸಿದ ದೈವ ವ್ಯಕ್ತಿತ್ವವೇ ಶ್ರೀ ಕೃಷ್ಣ.