ರೈತರು ಮಾರಾಟಗಾರರಾದಾಗ ಲಾಭ ಗಳಿಸಲು ಸಾಧ್ಯ: ಡಾ. ಶರಣಪ್ಪ ವಿ. ಹಲಸೆರೈತರು ಉತ್ಪಾದಕರಲ್ಲದೆ, ಮಾರಾಟಗಾರರೂ ಆಗುವುದು ಇಂದಿನ ಅನಿವಾರ್ಯ. ಕೃಷಿ ಜೊತೆಗೆ ಅಣಬೆ ಬೇಸಾಯ, ಜೇನುಸಾಕಾಣಿಕೆ, ಹೈನುಗಾರಿಕೆ, ಕುರಿ ಸಾಕಾಣಿಕೆ, ಮೀನು ಸಾಕಾಣಿಕೆ, ಕೋಳಿ ಸಾಕಾಣಿಕೆ, ಸಿರಿಧಾನ್ಯಗಳ ಮೌಲ್ಯವರ್ಧನೆ, ನರ್ಸರಿ, ಎರೆಗೊಬ್ಬರ, ಮಣ್ಣು ಮತ್ತು ನೀರಿನ ಪರೀಕ್ಷೆ ಕೇಂದ್ರ, ಪಶು ಆಹಾರ, ಉಪ್ಪಿನಕಾಯಿ, ಮಸಾಲೆ ಪುಡಿಗಳ ತಯಾರಿಕೆ, ಕೃಷಿ ಪ್ರವಾಸೋದ್ಯಮ ಮತ್ತು ಕೃಷಿ ಪರಿಕರ ಮಾರಾಟ ಕೇಂದ್ರ ಮುಂತಾದ ಕೃಷಿ ಉಪ ಕಸುಬು ಕೈಗೊಳ್ಳಲು ಮುಂದಾಗಬೇಕು