ತಲಕಾಡು ಪಪಂ ಆಗಿ ಮೇಲ್ದರ್ಜೆಗೇರಿಸಲು ಪ್ರಸ್ತಾವನೆ...!ಗಂಗರಸರ ಕಾಲದಲ್ಲಿ 700 ವರ್ಷ ರಾಜಧಾನಿಯಾಗಿ ಮೆರೆದ ತಲಕಾಡು, ಟಿ.ನರಸೀಪುರ ಕಪಿಲಾ ಕಾವೇರಿ ಹಳೆಯ ಸೇತುವೆ ನಿರ್ಮಾಣದ ಮುನ್ನ ತಾಲೂಕು ಆಡಳಿತ ಕೇಂದ್ರವಾಗಿ ಕಾರ್ಯ ನಿರ್ವಹಿಸಿತ್ತು. 1960ರಲ್ಲಿ ಮೇಲ್ದರ್ಜೆ ಮುನ್ಸೀಪಾಲಿಟಿ ನಂತರ 1973ರ ನಂತರ ಪಟ್ಟಣ ಪುರಸಭೆ, 1992ರಲ್ಲಿ ಮಂಡಲ ಪಂಚಾಯಿತಿಯಾಗಿ, ಪ್ರಸ್ತುತ 30 ವರ್ಷದಿಂದ ಗ್ರಾಪಂ ದರ್ಜೆಯಲ್ಲಿ ಆಡಳಿತ ನಿರ್ವಹಿಸುತ್ತಿದೆ.