ಗ್ರೀನ್ ಬರ್ಡ್ಸ್ ಠೇವಣಿದಾರರ ಹೋರಾಟಕ್ಕೆ ಜಯ: ನೂರಾರು ಕೋಟಿ ರು. ಆಸ್ತಿ ಹರಾಜು ಪ್ರಕ್ರಿಯೆ ಆರಂಭಲಕ್ಷಾಂತರ ಕೂಲಿ ಕಾರ್ಮಿಕರು, ಬಡವರು, ರೈತರು ಠೇವಣಿ ಮಾಡಿ ಹೂಡಿಕೆ ಮಾಡಿದ್ದ ಗ್ರೀನ್ ಬರ್ಡ್ಸ್ ಆಗ್ರೋ ಕಂಪನಿ ವಂಚನೆ ಪ್ರಕರಣದ ಬಗ್ಗೆ ಕಳೆದ 10 ವರ್ಷಗಳಿಂದ ಹೋರಾಟ ಮಾಡಿದ್ದರಿಂದ ಸಂಸ್ಥೆಯ ಆಸ್ತಿಗಳ ಹರಾಜು ಪ್ರಕ್ರಿಯ ಮುಂದಾಗಿದೆ. ಆಸ್ತಿಗಳು ಕೂಡ ಫಲವತ್ತಾದ ಭೂಮಿಯಾಗಿದ್ದು, ವ್ಯವಸಾಯಕ್ಕೆ ಯೋಗ್ಯವಾಗಿದೆ. ಈ ಬಗ್ಗೆ ಠೇವಣಿದಾರರು ಚಿಂತನೆ ನಡೆಸಿ ಹೆಚ್ಚು ಜನ ಹರಾಜು ಖರೀದಿಯಲ್ಲಿ ಪಾಲ್ಗೊಳ್ಳಲು ಜಾಗೃತಿ ಮೂಡಿಸಬೇಕು.