ಮೈಸೂರಿನಲ್ಲಿ ಏಕಲವ್ಯ ಶಾಲೆಗಳ ರಾಷ್ಟ್ರೀಯ ಕ್ರೀಡಾಕೂಟ: ಡಾ. ಮಂಜುನಾಥ್ ಪ್ರಸಾದ್ದೇಶದ ವಿವಿಧ ರಾಜ್ಯಗಳಿಂದ 4500 ಕ್ರೀಡಾಪಟುಗಳು, 1500 ಶಾಲಾ ಶಿಕ್ಷಕರು, ಸಿಬ್ಬಂದಿ ಸೇರಿದಂತೆ ಸುಮಾರು 6000 ಜನ ಕ್ರೀಡಾಕೂಟದಲ್ಲಿ ಭಾಗಿ, ಏಕಲವ್ಯ ಮಾದರಿ ವಸತಿ ಶಾಲೆಯು ಕೇಂದ್ರ ಸರ್ಕಾರ ನಡೆಸುತ್ತಿರುವ ಶಾಲೆಗಳಾಗಿದ್ದು, 20 ಕೋಟಿ ವೆಚ್ಚ ಅನುದಾನದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಜ.8 ರಿಂದ 12 ರವರೆಗೆ ಆಯೋಜಿಸಲಾಗುವುದು.