ಸಾಹಿತ್ಯವೆನ್ನುವುದು ಮಾನವೀಯ ನೆಲಯ ಪರಿಣಾಮಕಾರಿ ಮಾಧ್ಯಮಸಾಹಿತ್ಯವೆನ್ನವುದು ಮಾನವೀಯತೆಯ ಇತಿಮಿತಿಯಲ್ಲಿ ಪ್ರತಿಕ್ರಿಯಿಸುವ ಪರಿಣಾಮಕಾರಿ ಮಾಧ್ಯಮವೆಂದು ಸಾಹಿತಿ ವಾಸುದೇವ ನಾಡಿಗ್ ಅಭಿಪ್ರಾಯಪಟ್ಟರು. ನಗರದ ದವಳಗಿರಿ ಬಡಾವಣೆಯ ಗಾಯತ್ರಿ ಶಿವರಾಂ ಇನ್ನರ್ವ್ಹೀಲ್ ಕ್ಲಬ್ ಸಭಾ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶೋಭಾ ಮಲ್ಲಿಕಾರ್ಜುನ್ರ ಮನದನಿ ಕವನ ಸಂಕಲನ ಬಿಡುಗಡೆ ಮಾಡಿ ಮಾತನಾಡಿದ ಅವರು, ಉತ್ತಮ ಕೃತಿ ರಚನೆಗೆ ಆಳವಾದ ಅಧ್ಯಯನ, ನಿರಂತರ ಓದು, ಬಹುಮುಖ್ಯವಾಗುತ್ತದೆ ಎಂದರು.