ಅನ್ಯಾಯಕಾರಿ ಆಡಳಿತ ಈ ಮಕ್ಕಳ ಬೀದಿಗೆ ತಳ್ಳಬಹುದೇ!ಹುಲಗಲಕುಂಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದರಿಂದ ಎಂಟರವರೆಗೆ ತರಗತಿಗಳಿದ್ದು ಸುಮಾರು 120 ವಿದ್ಯಾರ್ಥಿಗಳಿದ್ದಾರೆ. ಮೂರು ಆರ್ ಸಿಸಿ ಕಟ್ಟಡ, ಮೂರು ಹೆಂಚಿನ ಕಟ್ಟಡ ಸೇರಿ ಒಟ್ಟು ಒಂಬತ್ತು ಕೋಣೆಗಳಿದ್ದವು. ಆದರೆ ಯಾವಾಗ ಬೀದರ್ ಟು ಶ್ರೀರಂಗಪಟ್ಟಣ ರಸ್ತೆ ನಿರ್ಮಿಸಲು ಶಾಲಾ ಕಟ್ಟಡಗಳನ್ನು ಒಡೆಯುತ್ತಾರೆ ಎಂಬ ಮಾಹಿತಿ ಸಿಕ್ಕಿತೋ ಸುಮಾರು 40 ಕ್ಕೂ ಹೆಚ್ಚು ಮಕ್ಕಳನ್ನು ಪೋಷಕರು ಬೇರೆ ಶಾಲೆಗಳಿಗೆ ಸೇರಿಸಿಬಿಟ್ಟರು. ರಸ್ತೆ ಕಾಮಗಾರಿ ಗುತ್ತಿಗೆ ಪಡೆದ ಕಂಪನಿಯು ಶಾಲಾಡಳಿತ ಮಂಡಳಿ, ಪೋಷಕರು ಮತ್ತು ಗ್ರಾಮಸ್ಥರ ಮನವೊಲಿಸಿ ಹೊಸ ಕಟ್ಟಡ ಕಟ್ಟಿ ಕೊಡುತ್ತೇವೆ ಎಂದು ಹೇಳಿ ಎಸ್ಡಿಎಂಸಿ ಅಧ್ಯಕ್ಷರು ಮತ್ತು ಮುಖ್ಯ ಶಿಕ್ಷಕರ ಜಂಟಿ ಖಾತೆಗೆ 52 ಲಕ್ಷ ಹಣ ವರ್ಗಾವಣೆ ಮಾಡಿಯೂ ಬಿಟ್ಟಿತು. ಹಣ ಬಂದು ಖಾತೆಗೆ ಬಿದ್ದ ಮೇಲೆ ಹೊಸ ಕಟ್ಟಡಗಳ ನಿರ್ಮಾಣವಾಗುತ್ತದೆ ಎಂದು ಸಹಜವಾಗಿ ಎಲ್ಲರೂ ನಂಬಿ ಬಿಟ್ಟರು. ಆದರೆ ಆಗಿರುವುದೇ ಬೇರೆ.