ಮುರುಘಾಮಠದಲ್ಲಿ ಇಂದಿನಿಂದ ಶರಣ ಸಂಸ್ಕೃತಿ ಉತ್ಸವಮಧ್ಯ ಕರ್ನಾಟಕದ ಜನಪ್ರಿಯ ದಸರಾವೆಂದೇ ಖ್ಯಾತಿ ಪಡೆದ ಚಿತ್ರದುರ್ಗ ಮುರುಘಾಮಠದ ಶರಣ ಸಂಸ್ಕೃತಿ ಉತ್ಸವ ಅ.21 ರಿಂದ 25 ವರೆಗೆ ನಡೆಯಲಿದ್ದು, ಉತ್ಸವ ಸಮಿತಿ ಗೌರವಾಧ್ಯಕ್ಷ ಅಥಣಿ ಗಚ್ಚಿನ ಮಠದ ಶಿವಬಸವ ಮಹಾಸ್ವಾಮಿಗಳು, ಎಸ್.ಜೆಎಂವಿದ್ಯಾಪೀಠದ ಕಾಯನಿರ್ವಾಣಾಧಿಕಾರಿ ಎಂ.ಭರತ್ ಕುಮಾರ್ ಶುಕ್ರವಾರ ಪೂರ್ವ ಸಿದ್ದತೆ ಪರಿಶೀಲಿಸಿದರು. ಇಂದು ಬೆಳಗ್ಗೆ 10ಕ್ಕೆ ಶ್ರೀಮಠದ ಅನುಭವ ಮಂಟಪ ಅವರಣದಲ್ಲಿ ಬಸವತತ್ವ ಧ್ವಜಾರೋಹಣ ನೆರವೇರಲಿದ್ದು, ಹುಣಸೇಮಠದ ಚನ್ನಬಸವ ಸ್ವಾಮೀಜಿ, ಶ್ರೀ ಗುರು ಬಸವೇಶ್ವರ ಸಂಸ್ಥಾನಮಠದ ಶಿವಾನಂದ ಶ್ರೀಗಳು ಸಮ್ಮುಖ ವಹಿಸುವರು. ಬೆಂಗಳೂರಿನ ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಧ್ವಜಾರೋಹಣ ನೆರವೇರಿಸಲಿದ್ದು, ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ ಆಗಮಿಸುವರು.