ಹೊಳೆನರಸೀಪುರದಲ್ಲಿ ಮಹಿಳೆಯರಿಂದ ಮತಾಂತರಕ್ಕೆ ಯತ್ನಅಂಗಡಿ ಮಾಲೀಕ ಮತಾಂತರ ಮಾಡಿಸಲು ಪಟ್ಟಣದ ಪ್ರಮುಖ ವೃತ್ತಕ್ಕೂ ಬಂದಿದ್ದೀರ ಎಂದು ಏರು ಧ್ವನಿಯಲ್ಲಿ ಪ್ರಶ್ನಿಸಿದಾಗ ಮಹಿಳೆಯರು ಓಡಿ ಹೋಗಿದ್ದಾರೆ. ಹುಡುಕಿದರೂ ಮಹಿಳೆಯರು ಸಿಗದೇ ಇದ್ದಾಗ, ಇದರ ಸಂಬಂಧ ದೂರು ನೀಡದೇ ಇದ್ದರೂ ಸಹ ಮಹಿಳೆಯರು ನೀಡಿದ ಕಾರ್ಡ್ ಅಂಗಡಿ ಮಾಲೀಕನ ಬಳಿ ಇದೆ. ಪಟ್ಟಣದ ಸ್ಲಮ್ ಬೋರ್ಡ್, ನರಸಿಂಹನಾಯಕ ನಗರ ಹಾಗೂ ಇತರೆ ಬಡಾವಣೆಯಲ್ಲಿ ಇಂತಹ ಮತಾಂತರರ ವಿನಯದ ಮಾತಿಗೆ ಮರುಳಾಗಿ ಇವರ ವಿಚಾರ ನಂಬಿಸುವ ಸ್ಥಿತಿಯಿಂದಾಗಿ ನೂರಾರು ಕುಟುಂಬಗಳು ಮತಾಂತರಗೊಂಡು, ಪ್ರಾರ್ಥನಾ ಮಂದಿರದ ಹೆಸರಿನಲ್ಲಿ ಐವತ್ತಕ್ಕೂ ಹೆಚ್ಚು ಚರ್ಚ್‌ಗಳು ಪ್ರಾರಂಭವಾಗಿವೆ.