ಅಂಬೇಡ್ಕರ್ ಸೋಲಿಗೆ ಕಾಂಗ್ರೆಸ್ಸಿನಲ್ಲಿದ್ದ ಪುರೋಹಿತಶಾಹಿ ವರ್ಗವೇ ಕಾರಣ: ಶಾಸಕ ಪಿ.ಎಂ.ನರೇಂದ್ರಸ್ವಾಮಿರಾಷ್ಟ್ರಕ್ಕೆ ಕಾಂಗ್ರೆಸ್ಸಿನ ಕೊಡುಗೆ ಅಪಾರವಾಗಿದೆ. ಜೊತೆಗೆ ಅಂಬೇಡ್ಕರ್ ಅವರ ಕೊಡುಗೆಯೂ ಸಾಕಷ್ಟು ಇದೆ. ಅಂಬೇಡ್ಕರ್ ಚುನಾವಣೆಲ್ಲಿ ಸ್ಪರ್ಧಿಸಿದ್ದ ವೇಳೆ ಅವರನ್ನು ಕಾಂಗ್ರೆಸ್ಸಿಗರೇ ಸೋಲಿಸಿದರು ಎಂದು ಪದೇ ಪದೇ ಬಿಜೆಪಿಗರು ಹೇಳುತ್ತಲೇ ಇದ್ದಾರೆ. ಆದರೆ, ಅದರ ಮೂಲ ಹುಡುಕಿದಾಗ ಕಾಂಗ್ರೆಸ್‌ನೊಳಗಿದ್ದ ಪುರೋಹಿತಶಾಯಿ ವರ್ಗವೇ ಬಾಬಾ ಸಾಹೇಬರನ್ನು ಸೋಲಿಸಿದೆ.