ಮುದ್ದೇಬಿಹಾಳದಲ್ಲಿ ಮಂಕಾದ ಹೋಳಿ ಹಬ್ಬಮುದ್ದೇಬಿಹಾಳ: ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಹಿನ್ನೆಲೆಯಲ್ಲಿ ಮುದ್ದೆಬಿಹಾಳದಲ್ಲಿ ಹೋಳಿ ಹಬ್ಬ ಸ್ವಲ್ಪ ಮಂಕಾದಂತೆ ಕಂಡು ಬಂದಿತು. ಪ್ರತಿವರ್ಷ ಪಟ್ಟಣದಲ್ಲಿ ಎರಡು ದಿನಗಳ ಕಾಲ ಹೋಳಿ ಹಬ್ಬದ ಬಣ್ಣದೋಕುಳಿ ಆಚರಣೆ ಮಾಡಲಾಗುತ್ತದೆ. ಈ ಬಾರಿ ಸಂಭ್ರಮವಿದ್ದರೂ ಎಸ್ಸೆಸ್ಸೆಲ್ಸಿ ಮತ್ತು 5,8,9 ನೇ ತರಗತಿಗೆ ಬೋರ್ಡ್ ಪರೀಕ್ಷೆಯಿಂದಾಗಿ ಮಕ್ಕಳು ಅಧ್ಯಯನದಲ್ಲಿಯೇ ಬ್ಯುಜಿಯಾಗಿರುವುದು ಕಂಡು ಬಂತು.