ದಾವಣಗೆರೆ ವಿವಿಧೆಡೆ ಕಾಮದಹನ ಸಂಪನ್ನದಾವಣಗೆರೆ ನಗರದಲ್ಲಿ ಹೋಳಿ ಹುಣ್ಣಿಮೆ ಅಂಗವಾಗಿ ಭಾನುವಾರ ವಿವಿಧೆಡೆ ಕಾಮದಹನ ಆಚರಿಸಲಾಯಿತು. ಕಟ್ಟಿಗೆ, ಕುಳ್ಳು, ಮರಗಳ ಹಲಗೆ, ತೆಂಗಿನಗರಿ ಇತ್ಯಾದಿ ಉರುವಲುಗಳನ್ನು ಒಪ್ಪವಾಗಿ ಜೋಡಿಸಿ, ಕಾಮನ ಚಿತ್ರಪಟವನ್ನು ಇಟ್ಟು ಕಾಮನಿಗೆ ಪೂಜೆ ಸಲ್ಲಿಸಿದರು. ಬಳಿಕ ಕೊಳ್ಳಿಯಿಡಲಾಯಿತು. ಈ ವೇಳೆ ಯುವಕರು ಕೇಕೆ ಹಾಕಿ ಕುಣಿದರು. ಈ ಸಂದರ್ಭ ಸಾರ್ವಜನಿಕರಿಗೆ ಕಾರ-ಮಂಡಕ್ಕಿ ಪ್ರಸಾದ ವಿತರಿಸಲಾಯಿತು.