ಸಾಮಾನ್ಯರು, ಅನುಭಾವಿಗಳ ಜೀವನ ದೃಷ್ಟಿಕೋನಕ್ಕೂ ವ್ಯತ್ಯಾಸವಿದೆಹಿರಿಯರು, ಶರಣರು ಬಹಳಷ್ಟು ಚಿಂತನೆ ನಡೆಸಿದರೂ ನಮ್ಮ ಜೀವನ ಯಾಕ ಕೆಟ್ಟಿದೆ ಅಂದರೆ ನಮ್ಮ ವಿಚಾರಗಳು ಕೆಟ್ಟಿವೆ. ವಿಚಾರ ಕೆಟ್ಟಿದ್ದಕ್ಕ ಜೀವನ ಕೆಟ್ಟಿದೆ, ವಿಚಾರ ಒಳ್ಳೆಯವು ಇದ್ದರೆ ಜೀವನ ಸುಧಾರಿಸುತ್ತವೆ. ಸಾಮಾನ್ಯರ ಜೀವನ ದೃಷ್ಟಿಕೋನಕ್ಕೂ ಒಬ್ಬ ಅನುಭಾವಿ ಜೀವನ ದೃಷ್ಟಿಕೋನ ನೋಡುವುದು ಬಹಳ ವ್ಯತ್ಯಾಸ ಇದೆ, ಈ ನಾಡಿನ ಶರಣ ಪರಂಪರೆಯಲ್ಲಿ ಅಲ್ಲಮ ಪ್ರಭುಗಳು ಬಹಳ ದೊಡ್ಡವರು ಎಂದು ಕೊಪ್ಪಳದ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಡಂಬಳದಲ್ಲಿ ನಡೆದ ಸದ್ಭಾವನಾ ಪಾದಯಾತ್ರೆ ಬಳಿಕ ಹೇಳಿದರು.