ಆರ್.ಅಶೋಕ್ ಕುರ್ಚಿ ಗಟ್ಟಿ ಮಾಡಿಕೊಳ್ಳಲಿ: ಆಯನೂರುಅಶೋಕ್ಗೆ ಬೆಂಗಳೂರು ಹೊರತುಪಡಿಸಿ, ಬೆಳಗಾವಿ ಹಾಗೂ ಇತರ ಜಿಲ್ಲೆಗಳ ಪರಿಚಯ ಇಲ್ಲ. ಆರ್.ಅಶೋಕ್ ಮೊದಲು ತಮ್ಮ ಕುರ್ಚಿ ಗಟ್ಟಿ ಮಾಡಿಕೊಳ್ಳುವುದರ ಬಗ್ಗೆ ಗಮನಹರಿಸಲಿ, ಬಿಜೆಪಿ ಅಧಿಕಾರ ಅವಧಿಯಲ್ಲಿ ಪೂರ್ತಿ ಮಂತ್ರಿಮಂಡಲವನ್ನೇ ಹೆಚ್ಚಿಸಲು ಇವರಿಂದ ಸಾಧ್ಯವಾಗಲಿಲ್ಲ. ಬಿಜೆಪಿ ನಾಯಕರು ಪರಸ್ಪರ ಘೋಷಣೆ ಮಾಡುತ್ತ ಸಿಎಂ ಕುರ್ಚಿ ₹2000 ಕೋಟಿಗೆ ಮಾರಾಟಕ್ಕಿದೆ ಎನ್ನುತ್ತಿದ್ದರು. ಅಂತಹ ಪ್ರಸಿದ್ಧ ವಾತಾವರಣದಲ್ಲಿ ಬಿಜೆಪಿ ಸರ್ಕಾರವಿತ್ತು. ಇಂಥಹ ಸ್ವಂತ ಅನುಭವವನ್ನು ಅಶೋಕ್ ಹಂಚಿಕೊಳ್ಳುತ್ತಿದ್ದಾರೆ. ಇಂತಹ ಯಾವುದೇ ಘಟನೆಗಳು ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿಲ್ಲ ಎಂದು ತಿರುಗೇಟು ನೀಡಿದರು.