ಕೂಲಿ ಹಣದಿಂದ ವಿದ್ಯಾರ್ಥಿಗಳಿಗೆ ಸೈಕಲ್ ದೇಣಿಗೆ ರಾಯಚೂರು ಜಿಲ್ಲೆ ಅರಕೇರಾ ತಾಲೂಕಿನ ಕೊತ್ತದೊಡ್ಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಕಂದಿನ್ನಿ ಗ್ರಾಮದ, ಚಾಲಕ ವೃತ್ತಯ ಜೊತೆಗೆ ಕೂಲಿ ಕೆಲಸ ಮಾಡುವ ಆಂಜನೇಯ್ಯ ಯಾದವ್ ಎನ್ನುವ 24 ವರ್ಷದ ಯುವಕ ತಾನು ದುಡಿದು ಕೂಡಿಟ್ಟ ಹಣದಲ್ಲಿ 60 ಸಾವಿರ ರು. ಖರ್ಚು ಮಾಡಿ ಸೈಕಲ್ ಖರೀದಿಸಿ, 11 ಜನ ವಿದ್ಯಾರ್ಥಿಗಳಿಗೆ ವಿತರಿಸಿದ್ದಾರೆ.