ಕುಡಿಯುವ ನೀರಿನ ಕೆರೆಗಳ ವೀಕ್ಷಣೆಬೇಸಿಗೆ ಅಂಗವಾಗಿ ನಗರಸಭೆ ವ್ಯಾಪ್ತಿಯಲ್ಲಿರುವ ನಗರದ ದೊಡ್ಡ ಕೆರೆ ಮತ್ತು ಸಣ್ಣ ಕೆರೆ ಹಾಗೂ ತುರ್ವಿಹಾಳ ಪಟ್ಟಣ ಬಳಿಯಿರುವ 159 ಎಕರೆ ಪ್ರದೇಶದಲ್ಲಿರುವ ಕೆರೆ ಸ್ಥಳಕ್ಕೆ ನಗರಸಭೆ ಅಧ್ಯಕ್ಷೆ, ಉಪಾಧ್ಯಕ್ಷೆ, ಪೌರಾಯುಕ್ತ ಹಾಗೂ ಸದಸ್ಯರು ಖುದ್ದಾಗಿ ಭೇಟಿ ನೀಡಿ ವೀಕ್ಷಿಸಿದರು.