ಕಾರ್ಮಿಕ ವರ್ಗ ಹಕ್ಕುಗಳಿಗಾಗಿ ಹೋರಾಡಬೇಕುಸಿಂಧನೂರು: ಕಾರ್ಮಿಕ ವಿರೋಧಿ ನೀತಿಗಳನ್ನು ಅನುಸರಿಸಲು ಮುಂದಾಗಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಾಗೂ ಮಾಲಕತ್ವದ ವಿರುದ್ಧ ಕಾರ್ಮಿಕ ದಂಗೆಗಳನ್ನು ಸಂಘಟಿಸಬೇಕಾಗಿದೆ. ದಂಗೆಗಳಿಗೆ ಹೆಗಲೊಡ್ಡಿ ಕಾರ್ಮಿಕ ವರ್ಗದ ಐಕ್ಯತೆ, ಹಕ್ಕುಗಳನ್ನು ದಕ್ಕಿಸಿಕೊಳ್ಳುವ ಕ್ರಾಂತಿಕಾರಿ ಕಾರ್ಯಭಾರಗಳನ್ನು ಕೈಗೊಳ್ಳಬೇಕಾಗಿದೆ ಎಂದು ಎಐಸಿಸಿಟಿಯು ರಾಜ್ಯ ಅಧ್ಯಕ್ಷ ಪಿ.ಪಿ.ಅಪ್ಪಣ್ಣ ಹೇಳಿದರು.