ಪಠ್ಯೇತರ ಚಟುವಟಿಕೆ ಬೇಗುದಿಗೆ ಬಿದ್ದ ಶಿಕ್ಷಕರುಮಕ್ಕಳ ದಾಖಲಾತಿ ಹೆಚ್ಚಿಸಬೇಕು, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಕರೆತರಬೇಕು, ಪಠ್ಯ, ಬೋಧನೆ ಕಡಿಮೆ ಪಠ್ಯೇತರ, ದಾಖಲೆಗಳ ನಿರ್ವಹಣೆ ಜಾಸ್ತಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಅನುಷ್ಠಾನಕ್ಕೆ ಒತ್ತು, ಅರೆಬರೆ ಸವಲತ್ತುಗಳು, ಬೆಟ್ಟದಷ್ಟು ಕೆಲಸ-ಕಾರ್ಯಗಳು, ಹೀಗೆ ಅನ್ಯ ಚಟುವಟಿಕೆಗಳಡಿ ಸಿಕ್ಕಿ ಹಾಕಿಕೊಂಡು ಸರ್ಕಾರಿ ಶಾಲೆಗಳ ಶಿಕ್ಷಕರು ನಲುಗುತ್ತಿದ್ದು. ಇದರಿಂದಾಗಿ ಗುಣಮಟ್ಟದ ಶಿಕ್ಷಣ, ಫಲಿತಾಂಶ ಸುಧಾರಣೆಗೆ ಕೈಗೊಂಡ ಹಲವಾರು ಕ್ರಮಗಳು ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಗುತ್ತಿದೆ.