ಕಳೆಕಟ್ಟಿದ ರಾಯರ 354ನೇ ಉತ್ತರಾರಾಧನೆಕಲಿಯುಗದ ಕಲ್ಪತರು,ಯತಿಕುಲ ತಿಲಕ,ಮಂತ್ರಾಲಯ ನಿವಾಸಿ ಶ್ರೀರಾಘವೇಂದ್ರತೀರ್ಥ ಗುರುಸಾರ್ವಭೌಮರ 354 ನೇ ವರ್ಷದ ಆರಾಧನಾ ಮಹೋತ್ಸವದಲ್ಲಿ ಮಂಗಳವಾರ ಉತ್ತರಾರಾಧನೆ ನಿಮಿತ್ತ ನಡೆದ ವಸಂತೋತ್ಸವ, ಶ್ರೀಪ್ರಹ್ಲಾದ ರಾಜರ ಉತ್ಸವ ಮೂರ್ತಿ ಮೆರವಣಿಗೆ, ಪೀಠಾಧಿಪತಿಗಳ ಅನುಗ್ರಹ ಸಂದೇಶ, ಮಹಾ ರಥೋತ್ಸವ ಸೇರಿ ಮೊದಲಾದ ಧಾರ್ಮಿಕ ವಿಧಿವಿಧಾನಗಳು, ಸಾಂಸ್ಕೃತಿಕ ಸಮಾರಂಭಗಳು ಸಂಭ್ರಮ, ಸಡಗರ ಕಳೆಕಟ್ಟುವಂತೆ ಮಾಡುವುದರ ಜೊತೆಗೆ ಅತ್ಯಂತ ವೈಭವೋಪಿತವಾಗಿ ಜರುಗಿದವು.