ಜಾಲಹಳ್ಳಿಯಲ್ಲಿ ನಿಧಿಗಳ್ಳರ ಹಾವಳಿ: ಪತ್ತೆಗೆ ಒತ್ತಾಯದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮದ ವಲಯದಲ್ಲಿನ ಬಸವಣ್ಣ ದೇಗುಲದಲ್ಲಿ ಅಗೆದು ನಿಧಿಗಾಗಿ ಕಳ್ಳರ ಶೋಧ ಮಾಡಿದ್ದು, ಲಿಂಗಾಯತ ಸಮಾಜದ ಮುಖಂಡ ರಾಮನಗೌಡ ಮಾಲಿ ಪಾಟೀಲ್ ಅವರು ಪೊಲೀಸ್ ಠಾಣೆಗೆ ಲಿಖಿತ ಮಾಹಿತಿ ನೀಡಿದ್ದಾರೆ. ಈಗಾಗಲೇ ಸ್ಥಳೀಯ ಪೊಲೀಸ್ ಅಧಿಕಾರಿಗಳು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅದರೆ, ಪ್ರಕರಣ ದಾಖಲಿಸಿಕೊಂಡಿಲ್ಲ ಎಂದು ತಿಳಿದು ಬಂದಿದೆ.