ಪಿಡಿಒ ಅವ್ಯವಹಾರ ತನಿಖೆಗೆ ಆದೇಶಿಸಿ: ಶೇಷಗಿರಿಹಳ್ಳಿ ಶಿವಣ್ಣರಾಮನಗರ: ತೆರಿಗೆ ಹಣ ದುರುಪಯೋಗ, ಕುಡಿಯುವ ನೀರು ಸಾಮಗ್ರಿ ಖರೀದಿಯಲ್ಲಿ ಅಕ್ರಮ, ಲೇಔಟ್ ಮಾಡದ ಜಾಗಕ್ಕೆ ಇ-ಖಾತೆ ನೀಡುವ ಮೂಲಕ ಮಂಚನಾಯಕನಹಳ್ಳಿ ಗ್ರಾಪಂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೋಟ್ಯಂತರ ರು. ಅವ್ಯವಹಾರ ನಡೆಸಿದ್ದು, ಈ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು ಎಂದು ಗ್ರಾಪಂ ಮಾಜಿ ಸದಸ್ಯ ಶೇಷಗಿರಿಹಳ್ಳಿ ಶಿವಣ್ಣ ಒತ್ತಾಯಿಸಿದರು.