ರಾಮನೋ, ರಾವಣನೋ ನೀವೇ ನಿರ್ಧರಿಸಿ: ಶಾಸಕ ಮುನಿರತ್ನಯಾರೂ ನಿರೀಕ್ಷಿಸದ ಒಬ್ಬ ಸಜ್ಜನ ವ್ಯಕ್ತಿಯನ್ನು ಮಾನ್ಯ ಪ್ರಧಾನ ಮಂತ್ರಿಯವರು ನಮ್ಮ ಲೋಕಸಭಾ ಕ್ಷೇತ್ರಕ್ಕೆ ಆಯ್ಕೆ ಮಾಡಿರುವುದು ಹೆಮ್ಮೆಯ ವಿಷಯವಾಗಿದ್ದು, ಈ ಚುನಾವಣೆಯು ಧರ್ಮ-ಅಧರ್ಮದ ನಡುವಿನ ಹೋರಾಟವಾಗಿದೆ. ತಮ್ಮ ವೃತ್ತಿ ಜೀವನದಲ್ಲಿ ಲಕ್ಷಾಂತರ ಜನರ ಪ್ರಾಣ ಉಳಿಸಿರುವ ಸರಳ, ಸಜ್ಜನಿಕೆಯ ವ್ಯಕ್ತಿ ಬೇಕೋ ಅಥವಾ ದರ್ಪ, ದೌರ್ಜನ್ಯ, ದಬ್ಬಾಳಿಕೆಯಿಂದಲೇ ಜನರನ್ನು ಹೆದರಿಸಿ ರಾಜಕೀಯ ನಡೆಸುತ್ತಿರುವ ವ್ಯಕ್ತಿ ಬೇಕೋ ಎಂದು ಜನರೇ ತೀರ್ಮಾನಿಸಬೇಕಾಗಿದೆ.