ಮಹಿಳಾ ಕಲಾವಿದೆಯರ ಪೌರಾಣಿಕ ನಾಟಕ ಪ್ರಶಂಸನೀಯಇತ್ತೀಚಿಗೆ ಜನರು ಸಿನಿಮಾ, ಧಾರಾವಾಹಿಗಳ ವ್ಯಾಮೋಹಕ್ಕೆ ಒಳಗಾಗಿದ್ದು, ರಂಗಭೂಮಿಯತ್ತ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಆದರೆ, ದ್ರೌಪದಿ ವಿಜಯ ಅಥವಾ ಶ್ರೀ ಕೃಷ್ಣ ಸಂಧಾನ ಪೌರಾಣಿಕ ನಾಟಕ ಪ್ರದರ್ಶಿಸಿದ ಭಾರತ್ವಿಕಾಸ್ ಪರಿಷದ್ನ ಮಹಿಳಾ ಸದಸ್ಯರು ಪುರುಷ ಕಲಾವಿದರನ್ನು ಮೀರಿಸುವಂತೆ ಅಭಿಯಯಿಸುವ ಜತೆಗೆ ಸುಮಾರು ೧೦ ಗಂಟೆ ಕಾಲ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿದ್ದು ಶ್ಲಾಘನೀಯ ಎಂದು ಕಿರುತೆರೆ ಹಾಗೂ ಹಿರಿತೆರೆ ನಟ ತಾಲೂಕಿನ ಉಜ್ಜನಹಳ್ಳಿಯ ಹಂಸರಾಜ್ ಅಭಿಪ್ರಾಯಪಟ್ಟರು.