ಸಾಹಸ ಕಲೆಗೂ ಒಂದು ತರಗತಿ ಮೀಸಲಿಡುವ ಅಗತ್ಯರಾಮನಗರ: ಶಾಲಾ ಪಠ್ಯ ಪುಸ್ತಕದಲ್ಲೂ ಸಾಹಸ ಕಲೆಗಳ ಮಹತ್ವ ಮತ್ತು ಅವುಗಳ ಹಿನ್ನೆಲೆ ಕುರಿತು ಪಾಠವನ್ನು ಸೇರಿಸಬೇಕು. ಮಕ್ಕಳು ಇದರಿಂದ ಸ್ಫೂರ್ತಿಗೊಂಡು ಸ್ವಯಂಪ್ರೇರಿತವಾಗಿ ಕಲಿಯುತ್ತಾರೆ. ಶಾಲೆಗಳಲ್ಲಿ ದೈಹಿಕ ಶಿಕ್ಷಣಕ್ಕೆ ಒಂದು ತರಗತಿ ಇರುವಂತೆ, ಸಾಹಸ ಕಲೆಗೂ ಒಂದು ತರಗತಿಯನ್ನು ಮೀಸಲಿಡಬೇಕು ಎಂದು ಕರ್ನಾಟಕ ಸಾಹಸ ಕಲಾ ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ ಹಾಸನ ರಘು ಹೇಳಿದರು.