ಮೇಲ್ದರ್ಜೆಗೇರಿದ ಆಸ್ಪತ್ರೆಯಲ್ಲಿ ಮಕಾಡೆ ಮಲಗಿದ ವ್ಯವಸ್ಥೆ!?ಕುದೂರು: ಸುಂದರ ಕಟ್ಟಡವಿದೆ. ಆದರೆ ಮಳೆ ಬಂದರೆ ಸೋರುತ್ತದೆ. ಇಪ್ಪತ್ನಾಲ್ಕು ಗಂಟೆಯೂ ಹೆರಿಗೆ ಸೌಲಭ್ಯ ಎಂದು ಬೋರ್ಡಿದೆ, ಹೆರಿಗೆ ಮಾಡಿಸುವವರೇ ಇಲ್ಲ. ನಿತ್ಯ ನೂರಾರು ರೋಗಿಗಳು ಬರುತ್ತಾರೆ, ಅವರಿಗೆ ಸೇವೆ ಸಲ್ಲಿಸಲು ವೈದ್ಯರ ಕೊರತೆಯಿದೆ. ಶುದ್ಧ ಕುಡಿಯುವ ನೀರಿನ ಟ್ಯಾಂಕಿದೆ, ಅದರಲ್ಲಿ ನೀರಿಲ್ಲ. ಕಟ್ಟಡ ದೊಡ್ಡದಿದೆ, ಅದನ್ನು ಅಚ್ಚುಕಟ್ಟುಗೊಳಿಸಲು ಸಿಬ್ಬಂದಿ ಕೊರತೆ ಇದೆ.