ಸ್ಕಿಜೋಫ್ರೀನಿಯಾ ಗುಣಪಡಿಸುವ ಕಾಯಿಲೆ: ಡಾ.ಮಂಜುನಾಥ್ರಾಮನಗರ: ಸ್ಕಿಜೋಫ್ರೀನಿಯಾ ಎಂಬ ಮಾನಸಿಕ ಕಾಯಿಲೆಯನ್ನು ಚಿತ್ತವಿಕಲತೆ, ಚಿತ್ತಚಂಚಲತೆ ಅಥವಾ ಮಾನಸಿಕ ಅಸ್ವಸ್ಥತೆ ಎಂದು ಗುರುತಿಸಲಾಗಿದ್ದು ಇಂತಹ ಸಮಸ್ಯೆಗಳುಳ್ಳ ವ್ಯಕ್ತಿಗಳನ್ನು ಗುರುತಿಸಿ ಆಪ್ತ ಸಮಾಲೋಚನೆಯಿಂದ ಆತ್ಮಸ್ಥೈರ್ಯ ತುಂಬಿ ಚಿಕಿತ್ಸೆ ನೀಡಿ ಗುಣಪಡಿಸಬಹುದು ಎಂದು ಜಿಲ್ಲಾ ಮಾನಸಿಕ ಆರೋಗ್ಯಾಧಿಕಾರಿ ಡಾ.ಸಿ. ಮಂಜುನಾಥ್ ಹೇಳಿದರು.