ನರೇಗಾ ಕೂಲಿ ಹಣ ದುರ್ಬಳಕೆ: ಮರು ಪಾವತಿಗೆ ಸೂಚನೆಕನಕಪುರ: ಮೃತಪಟ್ಟವರು, ಬೇರೆ ಕಡೆ ವಾಸವಿರುವವರ ಹೆಸರಿನಲ್ಲಿ ಪಾವತಿಯಾಗಿರುವ ಕೂಲಿ ಹಣ, ಎರಡು ಬಾರಿ ಒಂದೇ ಕಾಮಗಾರಿಗೆ ಬಿಡುಗಡೆಯಾಗಿರುವ ಹಣ, ಫಲಾನುಭವಿಗಳು ಕೆಲಸ ಮಾಡದೆ ಇದ್ದರೂ ಬಿಡುಗಡೆಯಾಗಿರುವ ಕೂಲಿಹಣವನ್ನು ಸರ್ಕಾರಕ್ಕೆ ಮರುಪಾವತಿ ಮಾಡುವಂತೆ ನರೇಗಾ ಜಿಲ್ಲಾ ಸಂಯೋಜಕ ಶ್ರೀನಿವಾಸ್ ಸೂಚಿಸಿದರು.