ಯಶಸ್ಸು ಸಂಪಾದಿಸಲು ವಿದ್ಯಾರ್ಥಿಗಳಲ್ಲಿ ಶಿಸ್ತು ಅಗತ್ಯರಾಮನಗರ: ಕ್ರೀಡೆಯಲ್ಲಿ ಗೆಲುವು ಸಾಧಿಸಲು ಮತ್ತು ಭವಿಷ್ಯದ ಜೀವನದ ಯಶಸ್ಸನ್ನು ಸಂಪಾದಿಸಲು ವಿದ್ಯಾರ್ಥಿಗಳಿಗೆ ಶಿಸ್ತು ಅತ್ಯಗತ್ಯ. ಆಟದ ನಿಯಮಗಳಲ್ಲಿ, ಸಮಯ ಪಾಲನೆಯಲ್ಲಿ, ಕೆಲಸ ಕಾರ್ಯಗಳಲ್ಲಿ, ನಡೆ ನುಡಿಯಲ್ಲಿ, ಆಲೋಚನೆಗಳಲ್ಲಿ ಹಾಗೂ ಭಾವನೆಗಳನ್ನು ವ್ಯಕ್ತಪಡಿಸುವಲ್ಲಿಯೂ ಶಿಸ್ತುನ್ನು ಬಾಲ್ಯದಿಂದಲೇ ಅಳವಡಿಸಿಕೊಂಡರೆ ಇತರರಿಗಿಂತ ವೇಗವಾಗಿ ಉನ್ನತಿ ಹೊಂದಲು ಸಾಧ್ಯವಾಗುತ್ತದೆ ಎಂದು ಮಾಜಿ ಎಂಎಲ್ಸಿ ಸಿ.ಎಂ.ಲಿಂಗಪ್ಪ ಕ್ರೀಡಾಪಟುಗಳಿಗೆ ಕಿವಿಮಾತು ಹೇಳಿದರು.