ಕಾಗೋಡಗೆ ಕರ್ನಾಟಕ ರತ್ನ ಪ್ರಶಸ್ತಿಗೆ ಒತ್ತಾಯಿಸಿ, ಪಹಣಿ ರದ್ದು ಖಂಡಿಸಿ ಪಾದಯಾತ್ರೆರಾಜಕಾರಣಿ, ಹಿರಿಯ ಮುತ್ಸದ್ಧಿ ಕಾಗೋಡು ತಿಮ್ಮಪ್ಪರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಲು ಒತ್ತಾಯಿಸಿ ಮತ್ತು ಭದ್ರಾವತಿ ಯಡೇಹಳ್ಳಿಯ ೩೪ ಕುಟುಂಬದವರಿಗೆ ಮಂಜೂರಾದ ಜಮೀನಿನ ಪಹಣಿ ರದ್ದು ಮಾಡಿರುವುದನ್ನು ಖಂಡಿಸಿ, ರೈತರ ಜಮೀನಿನ ಬಗ್ಗೆ ದೌರ್ಜನ್ಯ ದಬ್ಬಾಳಿಕೆ ನಡೆಸುತ್ತಿರುವ ಅರಣ್ಯ ಇಲಾಖೆ ಕ್ರಮ ಖಂಡಿಸಿ ಭಾನುವಾರ ಜಿಲ್ಲಾಧಿಕಾರಿ ಕಚೇರಿವರೆಗೂ ಮಾನವ ಹಕ್ಕುಗಳ ಹೋರಾಟ ಸಮಿತಿ ನೇತೃತ್ವದಲ್ಲಿ ಪಾದಯಾತ್ರೆ ನಡೆಸಲಾಯಿತು.