ಸಮನ್ವಯತೆ ಬದುಕು ಕಲಿಸಿಕೊಟ್ಟ ಲಂಕೇಶ್: ಚಂದ್ರೇಗೌಡನಮ್ಮೊಳಗಿನ ಅಜ್ಞಾನ, ಅಹಂಕಾರ ತೊರೆದು ಎಲ್ಲರೊಂದಿಗೆ ಸಮನ್ವಯತೆಯ ಬದುಕು ನಡೆಸುವುದು ಹೇಗೆ ಎಂದು ಕಲಿಸಿಕೊಟ್ಟವರು ಪಿ.ಲಂಕೇಶ್. ಲಂಕೇಶ್ ಪತ್ರಿಕೆ ಮೂಲಕ ಎಲ್ಲ ಸಮುದಾಯದ ಸೃಜನಶೀಲ ಬರಹಗಾರರು ಅವರವರ ಧರ್ಮ ಸಮುದಾಯಗಳ ಕುರಿತು ಒಳಿತು, ಕೆಡಕುಗಳನ್ನು ಬರೆದು ಸಾರ್ವತ್ರಿಕ ಗಮನಕ್ಕೆ ತರುವ ಕೆಲಸ ಮಾಡಿದರು. ಅನೇಕ ಬದಲಾವಣೆ, ಜಾಗೃತಿ ತರುವಲ್ಲಿ ಲಂಕೇಶ್ ಶ್ರಮಿಸಿದರು ಎಂದು ಸಾಹಿತಿ ಬಿ.ಚಂದ್ರೇಗೌಡ ಶಿವಮೊಗ್ಗದಲ್ಲಿ ಹೇಳಿದ್ದಾರೆ.