ಲಲಿತ ಕಲೆಗಳಲ್ಲಿ ಮನಸಿನ ನೋವು ಶಮನ ಶಕ್ತಿಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಂಶುಪಾಲ ಡಾ. ಟಿ.ಎಸ್. ರಾಘವೇಂದ್ರ ಮಾತನಾಡಿ, ತಬಲಾ ನುಡಿಸಿದರೆ ನಾದ, ಮಾಧುರ್ಯ ಸೃಷ್ಟಿಯಾಗಬೇಕು. ನಾದದ ಮಾಧುರ್ಯ ಕೇಳುಗರ ಹೃದಯವನ್ನು ತಟ್ಟಬೇಕು. ಮನಸ್ಸನ್ನು ಮುಟ್ಟಬೇಕು. ತಬಲಾ ಕಲಿಯುವ ವಿದ್ಯಾರ್ಥಿಗಳು ಈ ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ತಬಲಾ ಕಲಿಕೆಗೆ ದೀರ್ಘ ಕಾಲದ ಸಂಯಮ, ಏಕಾಗ್ರತೆ ಬಯಸುತ್ತದೆ. ಸತತ ಅಭ್ಯಾಸದಿಂದ ಕರಗತ ಮಾಡಿಕೊಳ್ಳಬೇಕು. ಶ್ರದ್ಧೆ, ಪರಿಶ್ರಮದಿಂದ ಯಶಸ್ಸು ದೊರಕುತ್ತದೆ ಎಂದು ಹೇಳಿದರು.