ಅಂಚೆ ಇಲಾಖೆಗೆ 169 ವರ್ಷ ಕಳೆದರೂ ಇನ್ನೂ ನೌಕರರಿಗೆ ಶೋಷಣೆಕೇಂದ್ರ ಸರ್ಕಾರ ನಮ್ಮ ಹೋರಾಟಕ್ಕೆ ಮಣಿದು 2016ನೇ ಇಸವಿಯಲ್ಲಿ ಶ್ರೀ ಕಮಲೇಶಚಂದ್ರ ಕಮಿಟಿ ಆಯೋಗ ನೇಮಿಸಿ, ಗಾಮೀಣ ಅಂಚೆ ನೌಕರರ ಸ್ಥಿತಿಗತಿಗಳ ಬಗ್ಗೆ ವರದಿ ಕೇಳಿತು. ಆ ಕಮಿಟಿ ವರದಿ ಸಲ್ಲಿಸಿ, 6 ವರ್ಷಗಳು ಕಳೆದರೂ ಅದನ್ನು ಸಂಪೂರ್ಣವಾಗಿ ಜಾರಿಗೊಳಿಸದೇ ಕೇಂದ್ರ ಸರ್ಕಾರ ಮತ್ತು ಅಂಚೆ ಆಡಳಿತ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಆಪಾದಿಸಿದರು. ಅಲ್ಲದೆ, ವಿವಿಧ ಬೇಡಿಕೆಗಳ ಈಡೇರಿಸುವಂತೆಯೂ ಒತ್ತಾಯಿಸಿದರು.