ನಿಡಗಲ್ ದುರ್ಗವನ್ನು ಅಭಿವೃದ್ಧಿಗೊಳಿಸಲು ಬದ್ಧ: ಶಾಸಕ ವೆಂಕಟೇಶ್ ಭರವಸೆಬಹು ಎತ್ತರ ಹಾಗೂ ವಿಶಾಲ ವ್ಯಾಪ್ತಿ ಹೊಂದಿರುವ ನಿಡಗಲ್ ಬೆಟ್ಟವು ತನ್ನದೇ ಆದ ವೈಶಿಷ್ಟ್ಯತೆ ಹೊಂದಿದ್ದು, ಎದುರಾಳಿಗಳು ಅಕ್ರಮ ಪ್ರವೇಶ ಮಾಡದಂತೆ ಬೆಟ್ಟದ ಸುತ್ತ ಬೃಹತ್ ಕೋಟೆಯಿಂದ ಸುತ್ತುವರಿದಿದೆ. ವಿವಿಧ ಮರ, ಗಿಡ ಸೇರಿ ಪ್ರಕೃತಿ ಮಡಿಲು ಮೈದುಂಬಿಸಿಕೊಂಡ ಈ ಬೆಟ್ಟವು ನೋಡುಗರಿಗೆ ಅತ್ಯಂತ ಆಕರ್ಷಣೀಯವಾಗಿದೆ.