ಪದವಿ ಮುಗಿಸಿದ 60% ಜನರಿಗೆ ಉದ್ಯೋಗವಿಲ್ಲತಿಪಟೂರು: ಪದವಿ ಮುಗಿದ ತಕ್ಷಣ ಕೆಲಸ ಸಿಕ್ಕೇ ಬಿಟ್ಟಿತು ಎಂಬ ಭಾವನೆ ವಿದ್ಯಾರ್ಥಿಗಳಿಂದ ದೂರವಾಗಬೇಕಿದ್ದು, ಭಾರತದಲ್ಲಿ ಪ್ರತಿ ವರ್ಷ ಪದವಿ ಮುಗಿಸಿ ಹೊರ ಬರುತ್ತಿರುವ ಪದವೀಧದರರಲ್ಲಿ ಶೇ.60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೆಲಸ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾಗುತ್ತಿರುವುದು ಕಳವಳಕಾರಿ ಸಂಗತಿ ಎಂದು ತುಮಕೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಹೇಳಿದರು.