ಆತ್ಮಸಾಕ್ಷಿಯಿಂದ ಬದುಕು ನಡೆಸಬೇಕು: ಮಾಧುಸ್ವಾಮಿವೀರಶೈವ ಸಮಾಜ ಕರ್ಮ ಮತ್ತು ಧರ್ಮ ಆಧಾರಿತ ಹಾಗೂ ಸಿದ್ಧಾಂತಗಳ ಮೇಲೆ ನಿಂತಿದ್ದು, ದೈವತ್ವವನ್ನು ಅಳವಡಿಸಿಕೊಂಡು ಆತ್ಮಸಾಕ್ಷಿಯಿಂದ ಬದುಕು ನಡೆಸುವ ಮೂಲಕ ಸಂಘಟಿತರಾಗಬೇಕಲ್ಲದೆ, ಸಮಾಜದಲ್ಲಿ ದ್ವೇಷ, ಅಸೂಯೆ, ಕಾಲೆಳೆಯುವ ಸ್ವಭಾವ, ಪಿತೂರಿಗಳನ್ನು ಬಿಟ್ಟಾಗ ಮಾತ್ರ ವೀರಶೈವ ಸಮಾಜದ ಪಕ್ಕಾ ಸಂಘಟನೆ ಹಾಗೂ ಅಭಿವೃದ್ಧಿ ಸಾಧ್ಯ ಎಂದು ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.