ಸಾಲ ಮರುಪಾವತಿಗೆ ಬ್ಯಾಂಕಿನಿಂದ ನೋಟಿಸ್; ರೈತಸಂಘ ಗರಂತಾಲೂಕಿನಲ್ಲಿ ಬರಗಾಲದ ಪರಿಸ್ಥಿತಿ ಎದುರಾಗಿದೆ. ಕುಡಿವ ನೀರು ಹಾಗೂ ಮೇವಿನ ಅಭಾವ ಸೃಷ್ಟಿಯಾಗಿದ್ದು, ಈ ಮದ್ಯೆ ಸಾಲ ವಸೂಲಾತಿಗೆ ಮುಂದಾದ ಖಾಸಗಿ ಬ್ಯಾಂಕ್ ಸಾಲ ಮರುಪಾವತಿಸುವಂತೆ ರೈತರಿಗೆ ನೋಟೀಸ್ ನೀಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ರೈತರಿಗೆ ಸಮಸ್ಯೆ ಉಂಟಾದರೆ ರೈತ ಸಮೂಹ ಲೋಕಸಭೆ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುವು ದಾಗಿ ತಾಲೂಕು ರೈತ ಸಂಘದ ಅಧ್ಯಕ್ಷ ಜಿ.ನರಸಿಂಹರೆಡ್ಡಿ ಎಚ್ಚರಿಕೆ ನೀಡಿದ್ದಾರೆ.