ಬೈಂದೂರು: ಮೊಗೇರಿ ಗೋಪಾಲಕೃಷ್ಣ ಅಡಿಗರ 32ನೇ ವಾರ್ಷಿಕ ಪುಣ್ಯಸ್ಮರಣೆಕವಿ ಗೋಪಾಲಕೃಷ್ಣ ಅಡಿಗರು ಬಾಲ್ಯದಲ್ಲಿ ಓದಿದ್ದ ಬೈಂದೂರಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅವರ 32ನೇ ವಾರ್ಷಿಕ ಪುಣ್ಯಸ್ಮರಣೆ ಕಾರ್ಯಕ್ರಮ ಸೋಮವಾರ ನಡೆಯಿತು. ಹಿರಿಯ ಪತ್ರಕರ್ತ, ಶಾಸನ ಅಧ್ಯಯನ ಹವ್ಯಾಸಿ, ಗೋಪಾಲಕೃಷ್ಣ ಅಡಿಗ ಶತಮಾನ ಪ್ರತಿಷ್ಠಾನ ಬೆಂಗಳೂರು ಇದರ ಸಂಚಾಲಕ ಮೊಗೇರಿ ಜಯರಾಮ ಅಡಿಗ ಉದ್ಘಾಟಿಸಿದರು.