ನ.4ರಿಂದ ದತ್ತ ಮಾಲೆ ಅಭಿಯಾನ: ಉಡುಪಿಯಿಂದ 500 ಭಕ್ತರುನ.4ರಿಂದ 10ರ ವರೆಗೆ ಈ ಅಭಿಯಾನ ನಡೆಯಲಿದೆ, 4ರಂದು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕಾರ್ಯಕರ್ತರು ದತ್ತಮಾಲೆ ಧಾರಣೆ ಮಾಡಲಿದ್ದಾರೆ. 7ರಂದು ರಾಜ್ಯಾದ್ಯಂತ ದತ್ತ ದೀಪೋತ್ಸವ ನಡೆಯಲಿದೆ. 9ರಂದು ದತ್ತ ಮಾಲಾಧಾರಿಗಳು ಪಡಿ ಸಂಗ್ರಹ ಮಾಡಲಿದ್ದಾರೆ. 10ರಂದು ದತ್ತಪೀಠಕ್ಕೆ ಬೃಹತ್ ಶೋಭಾಯಾತ್ರೆ, ಶ್ರೀ ಸತ್ಯ ದತ್ತ ವೃತ ಮತ್ತು ದತ್ತ ಹೋಮ, ಪ್ರಸಾದ ವಿತರಣೆ ನಡೆಸಲಿದ್ದಾರೆ.