ಮತ್ತೊಂದು ಶ್ರದ್ಧಾಕೇಂದ್ರವಾಗಿ ರೂಪುಗೊಂಡ ಯಲ್ಲಾಪುರದ ದತ್ತಮಂದಿರಯಲ್ಲಾಪುರ ಪಟ್ಟಣದ ನಾಯಕನಕೆರೆ ಬಳಿ ಇರುವ ದತ್ತ ಮಂದಿರದ ನೂತನ ಶಿಲಾಮಯ ಮಂದಿರ ನಿರ್ಮಾಣ ಪೂರ್ಣಗೊಂಡಿದ್ದು, ಮೂರ್ತಿ ಪ್ರತಿಷ್ಠಾಪನಾ ಮಹೋತ್ಸವ ಡಿ. ೧೩, ೧೪, ೧೫ರಂದು ನೆರವೇರಲಿದೆ. ತನ್ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.