ಭಗವದ್ಗೀತೆ, ಭಜನೆ ನಮ್ಮ ದಿನಚರಿಯಾಗಲಿ: ಸ್ವರ್ಣವಲ್ಲೀ ಶ್ರೀಗಂಗಾಮಾತೆ ಸ್ಮರಣೆ, ಸೂರ್ಯ ನಮಸ್ಕಾರ, ಭಗವದ್ಗೀತೆ ಪಠಣ, ಭಜನೆ ನಮ್ಮ ದಿನಚರಿಯಾಗಬೇಕು. ಭಗವದ್ಗೀತೆ ಮತ್ತು ಭಜನೆ ನಮ್ಮ ಶಕ್ತಿಯನ್ನು ಜಾಗ್ರತಗೊಳಿಸುತ್ತದೆ ಎಂದು ಸ್ವರ್ಣವಲ್ಲೀಯ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು. ಶಿರಸಿಯ ವಿಕಾಸಾಶ್ರಮ ಮೈದಾನದಲ್ಲಿ ಆಯೋಜಿಸಿದ್ದ ೨೭ನೇ ಯುಗಾದಿ ಉತ್ಸವ ಸಮಾರಂಭದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.