ಮಕ್ಕಳನ್ನು ಬಸ್ ನಿಲ್ದಾಣದಲ್ಲಿ ನಿಲ್ಲಿಸಿ ಸಮುದ್ರಕ್ಕೆ ಹಾರಿದ ಮಹಿಳೆಕುಮಟಾ ಪಟ್ಟಣದ ಪಿಕ್ಅಪ್ ನಿಲ್ದಾಣದಲ್ಲಿ ತನ್ನೆರಡು ಮಕ್ಕಳನ್ನು ನಿಲ್ಲಿಸಿ, ಅಲ್ಲಿಂದ ವನ್ನಳ್ಳಿಗೆ ತೆರಳಿ ಸಮುದ್ರಕ್ಕೆ ಹಾರಿ ಮಹಿಳೆಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ನಡೆದಿದೆ. ತಾನು ಚಲಾಯಿಸಿಕೊಂಡು ಬಂದಿದ್ದ ಸ್ಕೂಟಿಯನ್ನು ಸಮುದ್ರ ತಟದಲ್ಲೇ ನಿಲ್ಲಿಸಿದ್ದು, ಅದರ ಡಿಕ್ಕಿಯಲ್ಲಿ ತನ್ನ ಚಿನ್ನದ ಆಭರಣ ಮುಂತಾದವನ್ನು ಕಳಚಿಟ್ಟು ಲಾಕ್ ಮಾಡಿರುವುದು ಪತ್ತೆಯಾಗಿದೆ.