ಪರಿಸರ ಪಾಠ ಆಲಿಸಿದ ಸಚಿವ ಸತೀಶ್ ಜಾರಕಿಹೊಳಿಕನ್ನಡಪ್ರಭ ವಾರ್ತೆ ಶಿರಸಿಸಭೆ, ಸಮಾರಂಭ, ಉದ್ಘಾಟನೆ, ಭಾಷಣಗಳ ಒತ್ತಡದಲ್ಲಿರುವ ಸಚಿವರು ಉಪನ್ಯಾಸ ಕೇಳಲು ಕುಳಿತುಕೊಳ್ಳುವ ವ್ಯವಧಾನ ಇದೆಯೇ? ಆದರೆ ಇಂತಹ ಅಪರೂಪದ ಘಟನೆಗೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಕಳವೆ ಕಾನ್ಮನೆ ನಿಸರ್ಗ ಜ್ಞಾನ ಕೇಂದ್ರ ಸಾಕ್ಷಿಯಾಗಿದೆ.ಪೂರ್ವನಿರ್ಧಾರಿತ ಕಾರ್ಯಕ್ರಮ ಹೊರತಾಗಿ ನಿಸರ್ಗ ಜ್ಞಾನ ಕೇಂದ್ರ ವೀಕ್ಷಣೆಗೆ ಬಂದ ರಾಜ್ಯ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಪರಿಸರ ಉಪನ್ಯಾಸ ಮಾಡುವಂತೆ ಪರಿಸರ ಬರಹಗಾರ ಶಿವಾನಂದ ಕಳವೆಯವರಲ್ಲಿ ಕೋರಿದರು. ರಾಜ್ಯದ ಪ್ರಸ್ತುತ ಬರ ಸ್ಥಿತಿ ಹಾಗೂ ಜಲ ಸಂರಕ್ಷಣೆ ಕುರಿತು ಸುಮಾರು ಒಂದು ಗಂಟೆ ಕಳವೆಯವರ ಮಾತುಗಳನ್ನು ಆಸಕ್ತಿಯಿಂದ ಆಲಿಸಿದರು.