ಈರುಳ್ಳಿ ದರ ಇಳಿಮುಖ ಕಾರವಾರಭಾನುವಾರದ ಸಂತೆಯಲ್ಲಿ ಈರುಳ್ಳಿ ದರದಲ್ಲಿ ಇಳಿಕೆಯಾಗಿದ್ದು, ಮಾರುಕಟ್ಟೆಗೆ ಬಂದ ಗ್ರಾಹಕರು ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ.ಕಳೆದ ವಾರ ಪ್ರತಿ ಕಿಗ್ರಾಂ ಈರುಳ್ಳಿಗೆ ₹80-90 ರೇಟು ಕೇಳಿ ಗ್ರಾಹಕರು ಕಂಗಾಲಾಗಿದ್ದರು. ದರದಲ್ಲಿ ಭಾರಿ ಹೆಚ್ಚಳವಾಗಿದ್ದರಿಂದ 2 ಕಿಗ್ರಾಂ ಕೊಳ್ಳುವವರು 1 ಕಿಗ್ರಾಂ ಕೊಂಡು ಹೋಗುವಂತಾಗಿತ್ತು. ಈ ಬಾರಿ ದರ ₹120 ಗೆ ತಲುಪಲಿದೆ ಎಂದು ವ್ಯಾಪಾರಸ್ಥರು ಭವಿಷ್ಯ ನುಡಿದಿದ್ದರು. ಇದನ್ನು ಕೇಳಿ ಗ್ರಾಹಕರಿಗೆ ಇನ್ನಷ್ಟು ತಲೆಬಿಸಿಯಾಗಿತ್ತು.